ಖಗೋಳ ಮಾನ ( ಅಥವಾ ಅಥವಾ ಖ.ಮಾ.) - ಒಂದು ಉದ್ದದ ಅಳತೆಯಾಗಿದ್ದು, ಇದು ಸುಮಾರು ಭೂಮಿ ಮತ್ತು ಸೂರ್ಯರ ನಡುವಿನ ದೂರಕ್ಕೆ ಸಮನಾಗಿದೆ. ಇದು ಸೌರವ್ಯೂಹದಲ್ಲಿ ಆಕಾಶಕಾಯಗಳ ದೂರಗಳನ್ನು ಅಳೆಯಲು ಉಪಯೋಗಿಸುವ ಮಾನದಂಡ (ಅಸ್ಟ್ರಾನಾಮಿಕಲ್ ಯೂನಿಟ್). ಪ್ರಸ್ತುತದಲ್ಲಿ ಒಪ್ಪಿಗೆಯಲ್ಲಿರುವ ಖ.ಮಾ.ದ ಮೌಲ್ಯವು ೧೪೯,೫೯೭,೮೭೦,೭೦೦ ಮೀಟರ್‌ಗಳು (ಸುಮಾರು ೧೫ ಕೋಟಿ ಕಿ.ಮೀ. ಅಥವಾ ೯.೩ ಕೋಟಿ ಮೈಲಿಗಳು). ಇದು ಖಗೋಳ ದೂರಮಾನಗಳ ಮೂರು ಮುಖ್ಯ ಮಾನದಂಡಗಳಲ್ಲಿ ಒಂದು. ಇತರೆರಡು ಮಾನದಂಡಗಳೆಂದರೆ ಜ್ಯೋತಿರ್ವರ್ಷ ಮತ್ತು ಪಾರ್ಸೆಕ್. == ಉದಾಹರಣೆಗಳು == ಕೆಳಗಿನ ದೂರಗಳು ಅಂದಾಜಿನ ಸರಾಸರಿ ದೂರಗಳು. ಖಗೋಳಕಾಯಗಳ ನಡುವಿನ ದೂರವು ಅವುಗಳ ಕಕ್ಷೆ ಮತ್ತಿತರ ಅಂಶಗಳ ಕಾರಣದಿಂದ, ಸಮಯದೊಂದಿಗೆ ಬದಲಾಗುತ್ತದೆ ಎಂಬುದನ್ನು ಇಲ್ಲಿ ಗಮನದಲ್ಲಿಡಬೇಕು. ಭೂಮಿಯು ಸೂರ್ಯನಿಂದ ೧.೦೦ ± ೦.೦೨ ಖ.ಮಾ. ದೂರದಲ್ಲಿದೆ. ಬುಧ - 0.39 ಶುಕ್ರ - 0.72 ಚಂದ್ರವು ಭೂಮಿಯಿಂದ ೦.೦೦೨೬ ± ೦.೦೦೦೧ ಖ.ಮಾ. ದೂರದಲ್ಲಿದೆ. ಮಂಗಳ ಗ್ರಹವು ಸೂರ್ಯನಿಂದ ೧.೫೨ ± ೦.೧೪ ಖ.ಮಾ. ದೂರದಲ್ಲಿದೆ. ಕ್ಷುದ್ರಗ್ರಹಗಳು - 2.70 ಗುರು ಗ್ರಹವು ಸೂರ್ಯನಿಂದ ೫.೨೦ ± ೦.೦೫ ಖ.ಮಾ. ದೂರದಲ್ಲಿದೆ. ಶನಿ - 9.5 ಯುರೇನಸ್ - 19.2 ನೆಪ್ಚೂನ್ - 30.0 ಪ್ಲುಟೊ ಸೂರ್ಯನಿಂದ ೩೯.೫ ± ೯.೮ ಖ.ಮಾ. ದೂರದಲ್ಲಿದೆ. ಕೈಪರ್ ಪಟ್ಟಿಯು ಸುಮಾರು ೩೫ ಖ.ಮಾ. ದೂರದಲ್ಲಿ ಆರಂಭವಾಗುತ್ತದೆ ೪೫ ಖ.ಮಾ. - ಚದರಿದ ತಟ್ಟೆಯ ಪ್ರಾರಂಭ (ಇದರಲ್ಲಿ ೧೦ ಖ.ಮಾ. ಕೈಪರ್ ಪಟ್ಟಿಯ ಮೇಲೆ ಚಾಚಿದೆ) ೫೦-೫೫ ಖ.ಮಾ. - ಕೈಪರ್ ಪಟ್ಟಿಯ ಕೊನೆ ೯೦೩೭೭ ಸೆಡ್ನಾದ ಕಕ್ಷೆಯು ಸೂರ್ಯನಿಂದ ೭೬-೯೪೨ ಖ.ಮಾ. ದೂರಗಳ ವ್ಯಾಪ್ತಿಯಲ್ಲಿದೆ; ೨೦೦೬ರ ಪ್ರಕಾರ ಸೆಡ್ನಾ ಸೂರ್ಯನಿಂದ ೯೦ ಖ.ಮಾ. ದೂರದಲ್ಲಿದೆ. ೯೪ ಖ.ಮಾ.: ಸೌರ ಮಾರುತ/ಅಂತರನಾಕ್ಷತ್ರಿಕ ಮಾರುತ/ಅಂತರ ನಾಕ್ಷತ್ರಿಕ ಮಾಧ್ಯಮಗಳ ನಡುವೆ ಆಘಾತ ತರಂಗ ಆಗಸ್ಟ್ ೨೦೦೬ರ ಪ್ರಕಾರ, ಸೂರ್ಯನಿಂದ ೧೦೦ ಖ.ಮಾ. ದೂರದಲ್ಲಿರುವ ವಾಯೇಜರ್ ೧ ಗಗನ ನೌಕೆಯು ಅತಿ ದೂರದಲ್ಲಿರುವ ಮಾನವ ನಿರ್ಮಿತ ವಸ್ತುವಾಗಿದೆ. ೧೦೦ ಖ.ಮಾ.: ಸೌರವೇಷ್ಟನ ೧೦೦-೧೫೦ ಖ.ಮಾ.: ಚದರಿದ ತಟ್ಟೆಯ ಕೊನೆ ೫೦೦-೩೦೦೦ ಖ.ಮಾ.: ಹಿಲ್ಸ್ ಮೋಡ/"ಒಳ ಊರ್ಟ್ ಮೋಡಗಳ ಪ್ರಾರಂಭ ೨೦,೦೦೦ ಖ.ಮಾ: ಹಿಲ್ಸ್ ಮೋಡ/"ಒಳ ಊರ್ಟ್ ಮೋಡ"ಗಳ ಕೊನೆ, ಮತ್ತು "ಹೊರ ಊರ್ಟ್ ಮೋಡ"ದ ಪ್ರಾರಂಭ ೫೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅಂದಾಜು ದೂರ (೧.೦ ) ೧೦೦,೦೦೦ ಖ.ಮಾ.: "ಹೊರ ಊರ್ಟ್ ಮೋಡ"ದ ಹೊರ ಸೀಮೆಯ ಅತಿ ಹೆಚ್ಚಿನ ಸಂಭಾವ್ಯ ದೂರ (೧.೬ ). ೧೨೫,೦೦೦ ಖ.ಮಾ.: ಸೂರ್ಯನ ಗುರುತ್ವ ಕ್ಷೇತ್ರದ ಪ್ರಭಾವದ ವ್ಯಾಪ್ತಿಯ ಕೊನೆ (ಹಿಲ್/ರೋಶೆ ಗೋಳ). ಇದರಾಚೆಗಿರುವುದು ಅಂತರನಾಕ್ಷತ್ರಿಕ ಆಕಾಶ ಪ್ರಾಕ್ಸಿಮಾ ಸೆಂಟಾರಿಯು (ಅತಿ ಹತ್ತಿರದ ನಕ್ಷತ್ರ) ಸೂರ್ಯನಿಂದ ~೨೬೮ ೦೦೦ ಖ.ಮಾ. ದೂರದಲ್ಲಿದೆ. ಬೆಟಲ್‌ಗೀಸ್ ನಕ್ಷತ್ರದ ಸರಾಸರಿ ವ್ಯಾಸ ೨.೫೭ ಖ.ಮಾ.. ಸೂರ್ಯನಿಂದ ಕ್ಷೀರಪಥದ ಕೇಂದ್ರಕ್ಕಿರುವ ದೂರವು ಸುಮಾರು ೧.೭×೧೦೯ ಖ.ಮಾ. ಕೆಲವು ಪರಿವರ್ತನಾ ಅಪವರ್ತನಗಳು: ೧ ಖ.ಮಾ. = ೧೪೯ ೫೯೭ ೮೭೦.೬೯೧ ± ೦.೦೩೦ ಕಿ.ಮೀ. ≈ ೯೨ ೯೫೫ ೮೦೭ ಮೈಲಿಗಳು ≈ ೮.೩೧೭ ಜ್ಯೋತಿ ನಿಮಿಷಗಳು ≈ ೪೯೯ ಜ್ಯೋತಿ ಕ್ಷಣಗಳು ೧ ಜ್ಯೋತಿಕ್ಷಣ ≈ ೦.೦೦೨ ಖ.ಮಾ. ೧ ಗಿಗಾ ಮೀಟರ್ ≈ ೦.೦೦೭ ಖ.ಮಾ. ೧ ಜ್ಯೋತಿನಿಮಿಷ ≈ ೦.೧೨೦ ಖ.ಮಾ. ೧ ಮೈಕ್ರೊ ಪಾರ್ಸೆಕ್ ≈ ೦.೨೦೬ ಖ.ಮಾ. ೧ ಟೆರಾ ಮೀಟರ್ ≈ ೬.೬೮೫ ಖ.ಮಾ. ೧ ಜ್ಯೋತಿಘಂಟೆ ≈ ೭.೨೧೪ ಖ.ಮಾ. ೧ ಜ್ಯೋತಿದಿನ ≈ ೧೭೩.೨೬೩ ಖ.ಮಾ. ೧ ಮಿಲಿ ಪಾರ್ಸೆಕ್ ≈ ೨೦೬.೨೬೫ ಖ.ಮಾ. ೧ ಜ್ಯೋತಿಸಪ್ತಾಹ ≈ ೧೨೧೨.೮೪ ಖ.ಮಾ. ೧ ಜ್ಯೋತಿರ್ಮಾಸ ≈ ೫೧೯೭.೯ ಖ.ಮಾ. ೧ ಜ್ಯೋತಿರ್ವರ್ಷ ≈ ೬೩,೨೪೧ ಖ.ಮಾ. ೧ ಪಾರ್ಸೆಕ್ ≈ ೨೦೬,೨೬೫ ಖ.ಮಾ. == ಇವನ್ನೂ ನೋಡಿ == ಉದ್ದದ ಅಳತೆಗಳು == ಟಿಪ್ಪಣಿಗಳು == == ಉಲ್ಲೇಖಗಳು == . . " - ". , . , . : , 1995. ( : 2006-02-08 ವೇಬ್ಯಾಕ್ ಮೆಷಿನ್ ನಲ್ಲಿ.. : ) . . ., (1996), 21, , 1996